ನನ್ನ ಈ ಹೊಸ ಬ್ಲಾಗ್ ತುಂಬ ಚೆನ್ನಾಗಿದೆ. ಅಮೆರಿಕಾದ ಕನಸಿನೊಂದಿಗೆ ಇಲ್ಲಿಯವರೆಗೆ ಜೀವನದಲ್ಲಿ ಅನುಭವಿಸಿದ ರೋಚಕ ಕ್ಷಣಗಳನ್ನು ಎಲ್ಲರ ಜೊತೆಗೆ ಹಂಚಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುವುದು ನನ್ನ ಗುರಿ. ಕೆಲಸದಲ್ಲಿ ಯಾವಾಗಲು ಮುಳುಗಿ, ಮುದ್ದಿನ ಮಗ ಮತ್ತು ಹೆಂಡತಿಯ ಜೊತೆಗೆ ಜೀವನ ನಡೆಸುವಾಗ ಯಾವ ರೀತಿಯ ಬೇಸರ ಜೀವನದಲ್ಲಿಇರಬಾರದು. ಸುಲಭವಾಗಿ ಯಾರನ್ನು ಸ್ನೇಹ ಮಾಡುವ ಸ್ವಭಾವದವರಾದ ನಾನು, ನನ್ನ ಮಡದಿ, ಅಮೆರಿಕಾದ ಜೀವನಕ್ಕೆ ಹೊಂದಿಕೊಳ್ಳಲು ಪಡಬಾರದ ಪಾಡು ಪಡುತ್ತಿದ್ದೇವೆ, ೮ ವರ್ಷಗಳಾದ ಮೇಲೂ!
ನನ್ನ ಬ್ಲಾಗ್ ಓದಿದಾಗ ಎಲ್ಲರು ಒಂದು ಪ್ರಶ್ನೆ ಕೇಳುವುದು ಸಹಜ, ನೀವು ಇನ್ನೂ ಯಾಕೆ ಇಲ್ಲಿ ಗೂಟ ಹೋದಕೊಂದು ಇದ್ದಿರ? ನಿಮ್ಮ ಊರಿಗೆ ಹೋಗಿ ಸುಖವಾಗಿರಬರದೆ? ಹೌದು ಸ್ವಾಮಿ ನೀವು ಹೇಳೋದು ನಿಜಾನೆ ಆದರೆ ಹೊಟ್ಟೆ ಹೇಗೆ ಸ್ವಾಮಿ ತುಮ್ಬಿಸೋದು? ಊರಲ್ಲಿ ಕೆಲ್ಸ ಸಿಗಬೇಕು ಅಂದರೆ ಸುಮ್ನೆನ? ನಂಗೆ ಯಾರು ಮಂತ್ರಿಗಳು ಗೊತ್ತಿಲ್ಲ, ಒಂದೆರಡು ಕಡೆ ಅಪ್ಲೈ ಮಾಡಿದ್ದಕ್ಕೆ ಅಪ್ಲಿಕೇಶನ್ ಸಿಕ್ಕಿದೆ ಅಂತ ಕೂಡ ಯರ್ರೋ ಉತ್ತರ ಬರಿಲಿಲ್ಲ!
ಏನಪ್ಪಾ ಯಾ ಒರ್ರು ದಾಸ್ಯ ಇವ್ನು ಬರಿ ಗೊಳೋ ಅಂತ ಇದಾನೆ ಅಂತ ತಿಳ್ಕೋ ಬೇಡಿ ಸಾರ್! ಇದು ಬರಿ ಶುರು ಅಷ್ಟೆ! ಅಮೆರಿಕಾದಲ್ಲಿ ಇರೋ ಜನಗಳು ಎಲ್ಲರು ಸುಖವಗಿದರೆ ಅಂತ ತಿಲಿಬೇಡಿ. ಅದರಲ್ಲೂ ಕನ್ನಡದವರು ಸ್ವಲ್ಪ ಜಾಸ್ತಿನೇ ಕಿರಿಕ್. ಯಾಕೆ ಗೊತ್ತ, ನಮಗೆ ಬಂಧು-ಬಳಗ, ಸ್ನೇಹಿತರು, ಪಕ್ಕದಮನೆ ಸುಬ್ಬಮ್ಮ, ಕಾರ್ನರ್ ಮನೆ ಸೀನು ಅಂಥ ಒಂಥರಾ ಅಂತು-ನಂಟು ಜಾಸ್ತಿ. ಇವರೆಲ್ಲ ಇಲ್ಲದಿದ್ದರೆ ನಮಗೆ ಜೀವನದಲ್ಲಿ ಸುಖ ಅನ್ನಿಸೋದಿಲ್ಲ ಸ್ವಾಮಿ. ಅಮೆರಿಕಾದಲ್ಲಿ ಎಲ್ಲ ಸಿಗತ್ತೆ ಆದರೆ ನಮ್ಮವರು ಅಂಥ ಜೀವನದಲ್ಲಿ ಯಾರೂ ಸಿಗಲ್ಲ!
ಇವತ್ತಿಗೆ ನನ್ನ ಗೋಳಾಟ ಸಾಕು ನಾಳೆ ಮುಂದುವರೆಸುತ್ತೇನೆ!
No comments:
Post a Comment